top of page

ಗುಬ್ಬಿವಾಣಿ ಟ್ರಸ್ಟ್(ರಿ)

WhoAreWe

ಗುಬ್ಬಿವಾಣಿ ಟ್ರಸ್ಟ್® ನಾಗರಿಕರು, ವಿಶೇಷವಾಗಿ ಮಹಿಳೆಯರು, ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಆಡಳಿತ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿ, ಬದಲಾವಣೆ ತರಲು ನಾಯಕತ್ವ ವಹಿಸಬಲ್ಲ ಪ್ರಜ್ಞಾವಂತ ಮತ್ತು ಶಕ್ತಿಶಾಲಿ ಸಮಾಜವನ್ನು ನಿರ್ಮಿಸಲು ಶ್ರಮಿಸುತ್ತಿದೆ. ಮಹಿಳೆಯರು ಅರಿವು, 

 

ಸ್ವಾವಲಂಬನೆಯ ಮೂಲಕ ತಮ್ಮ ಜೀವನದ ಗುಣಮಟ್ಟವನ್ನು ಉತ್ತಮಗಳಿಸುವಲ್ಲಿ, ಸಮುದಾಯಗಳನ್ನು ರೂಪಿಸುವಲ್ಲಿ ಮತ್ತು ನ್ಯಾಯಯುತವಾದ, ಎಲ್ಲರನ್ನೂ ಒಳಗೊಂಡಂತಹ ಸಮ ಸಮಾಜವನ್ನು ಸೃಷ್ಟಿಸುವಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಿ, ಪ್ರಮುಖ ಪಾತ್ರವಹಿಸುವಂತಹ ಭವಿಷ್ಯವೇ ನಮ್ಮ ಆಶಯ.

ನಮ್ಮ ಧ್ಯೇಯ

ಅರಿವು, ಅಗತ್ಯ ಮಾಹಿತಿ ನೀಡುವ ಮೂಲಕ ಸ್ಥಳೀಯ ಆಡಳಿತ ವ್ಯವಸ್ಥೆಯೊಂದಿಗೆ ವ್ಯವಹರಿಸಲು ನಾಗರಿಕರಿಗೆ ತರಬೇತಿ ನೀಡುವುದು; ಘನತೆ ಮತ್ತು ಸ್ವಾವಲಂಬಿ ಜೀವನವನ್ನು ನಡೆಸಲು ಅಗತ್ಯ ಶಿಕ್ಷಣ ನೀಡಿ ಮಹಿಳೆಯರನ್ನು ಸಶಕ್ತಗೊಳಿಸುವುದು. 

 

ಸಾಮಾಜಿಕ ಸ್ಥಿತಿಯನ್ನು ಸುಧಾರಿಸುವಂತಹ ಸಮುದಾಯ ಚಟುವಟಿಕೆಗಳಲ್ಲಿ ಅನುಭವ ಗಳಿಸಲು ನಾಗರಿಕರನ್ನು ತೊಡಗಿಸುವುದು, ಅದರಲ್ಲಿ ಮಹಿಳೆಯರು ನಾಯಕತ್ವ ಮತ್ತು ಪ್ರಮುಖ ಪಾತ್ರ ವಹಿಸುವಂತೆ ಮಾಡುವುದು.

​ಆತ್ಮವಿಶ್ವಾಸದಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಲು, ನಾಗರಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ, ಅಗತ್ಯ ಬೆಂಬಲ ನೀಡುವುದು.

ನಮ್ಮ ಕಾರ್ಯಕ್ರಮಗಳು

OurPrograms
Mysuru_Ward_Samiti_Balaga_logo-nobg.png

ನಾಗರಿಕ ಸಬಲೀಕರಣ ವಿಭಾಗ

AH_Logo_1600x400-removebg-preview.png

ಅವಳ ಹೆಜ್ಜೆ - ಮಹಿಳಾ ಸಬಲೀಕರಣ ವಿಭಾಗ

ನಾಯಕತ್ವ

ಮಾಲವಿಕ ಗುಬ್ಬಿವಾಣಿ

ಸ್ಥಾಪಕ ಟ್ರಸ್ಟೀ

ಸುಮಾರು 15 ವರ್ಷಗಳ ಅನುಭವ ಹೊಂದಿರುವ ಮಾಜಿ ಐಟಿ ವೃತ್ತಿಪರರು. ಸಾಮಾಜಿಕ ಕಾರ್ಯಚಟುವಟಿಕೆಯಲ್ಲಿ ಒಂದು ದಶಕದಿಂದ ತೊಡಗಿಸಿಕೊಂಡಿದ್ದಾರೆ. ಹಲವಾರು ಮಹಿಳಾಪರ, ಭ್ರಷ್ಟಾಚಾರ ವಿರೋಧಿ, ಕನ್ನಡ ಪರ ಅಭಿಯಾನಗಳು ಹಾಗು ಪರಿಸರ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾಗರಿಕರಿಗೆ ಅವರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ನೀಡುವುದು ಮತ್ತು ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವ ಅನುಭವದ ಮೂಲಕ ಅವರನ್ನು ಸಬಲೀಕರಣಗೊಳಿಸುವುದು; ಮಹಿಳೆಯರು ಸ್ವಾವಲಂಬಿಗಳಾಗಲು ಮತ್ತು ಅವರ ಕನಸುಗಳನ್ನು ಸಾಧಿಸಲು ಬೆಂಬಲ ನೀಡುವುದು ಅವರ ಆಸಕ್ತಿ ಮತ್ತು ಧ್ಯೇಯ.

ಶಾಂತಲಾ ದಾಮ್ಲೆ

ಕಾರ್ಯನಿರ್ವಾಹಕ ನಿರ್ದೇಶಕರು, ಅವಳ ಹೆಜ್ಜೆ

ಶಾಂತಲಾ ದಾಮ್ಲೆ “ಅವಳ ಹೆಜ್ಜೆ” ಚಿತ್ರೋತ್ಸವ ನಿರ್ದೇಶಕಿ. ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಮತ್ತು ಅಮೆರಿಕಾದ ವರ್ಜೀನಿಯಾ ಟೆಕ್ ಯುನಿವರ್ಸಿಟಿಯಿಂದ ಎಂ.ಬಿ.ಎ. ಪದವಿ ಪಡೆದಿದ್ದಾರೆ. ಭಾರತದಲ್ಲಿ 4 ವರ್ಷ, ನಂತರ ಅಮೆರಿಕದಲ್ಲಿ 12 ವರ್ಷ, ಐಟಿ ಮತ್ತು ಮ್ಯಾನೇಜ್ಮೆಂಟ್ ಕ್ಷೇತ್ರಗಳಲ್ಲಿ ಉದ್ಯೋಗದ ಅನುಭವ ಹೊಂದಿದ್ದಾರೆ. 2010 ರಲ್ಲಿ ಭಾರತಕ್ಕೆ ಮರಳಿ, ಭ್ರಷ್ಟಾಚಾರ-ವಿರೋಧಿ, ಮಹಿಳಾ ಸಬಲೀಕರಣ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಉಷಾ ಸಂಪತ್‌ಕುಮಾರ್

ಔಟ್ರೀಚ್ ಸಂಯೋಜಕರು

ಮೂಲತಃ ಬೆಂಗಳೂರಿನವರಾದ ಉಷಾ ಸಂಪತ್ಕುಮಾರ್ ಒಬ್ಬ ಸಾಮಾಜಿಕ ಕಾರ್ಯಕರ್ತೆ. ಮೈಸೂರಿನ ‘ಸಮತಾ’ ಮತ್ತು ‘ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಮತ್ತು ಶಿಕ್ಷಣದಲ್ಲಿ ಪದವೀಧರೆಯಾಗಿರುವ ಉಷಾ, ವಿಶ್ವ ಮಂಗಳ ಎಜುಕೇಶನ್ ಸೊಸೈಟಿ, ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ಸೇರಿದಂತೆ ಅನೇಕ ಶಾಲೆಗಳಲ್ಲಿ ಶಿಕ್ಷಕಿಯಾಗಿದ್ದರು.

ರಾಘವೇಂದ್ರ ಉಡುಪ

ಸ್ಥಾಪಕ ಟ್ರಸ್ಟೀ

ರಾಘವೇಂದ್ರ ಅವರು ಐಟಿ ವೃತ್ತಿಪರರಾಗಿದ್ದು, ಪ್ರಮುಖ ಐಟಿ ಕಂಪನಿ ಇನ್ಫೋಸಿಸ್‌ಗೆ 25+ ವರ್ಷಗಳ ಕೊಡುಗೆ ನೀಡಿದ್ದಾರೆ. ಇನ್ಫೋಸಿಸ್ ಮೈಸೂರಿನ ಸಿಎಸ್‌ಆರ್ ವಿಭಾಗವಾದ ಸಾಫ್ಟೆನ್‌ನ ನಿರೂಪಕರಾಗಿ, ಅವರು ಮತ್ತು ಅವರ ತಂಡವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಅವರು ವಿವಿಧ ನಾಯಕತ್ವ ಕಾರ್ಯಾಗಾರಗಳು ಮತ್ತು ವೇದಿಕೆಗಳಲ್ಲಿ ತಮ್ಮ ನಿರ್ವಹಣಾ ಅನುಭವವನ್ನು ಹಂಚಿಕೊಂಡಿದ್ದಾರೆ.

ನಮ್ಮ ತಂಡ

ಲೀಲಾ

ಕಾರ್ಯಕ್ರಮ ಸಂಯೋಜಕರು

ಸೌಮ್ಯ

ಅಸೋಸಿಯೇಟ್ ಪ್ರೋಗ್ರಾಂ ಸಂಯೋಜಕರು

ಗುಬ್ಬಿವಾಣಿ ಟ್ರಸ್ಟ್®. Ph# 7259936111

bottom of page