top of page

ಸ್ಥಳೀಯ ಆಡಳಿತದಲ್ಲಿ ಜವಾಬ್ದಾರಿಯುತ, ಎಲ್ಲರನ್ನೂ ಒಳಗೊಳ್ಳುವ ಮತ್ತು ಸ್ಪಂದಿಸುವ ಸಮುದಾಯಗಳನ್ನು ನಿರ್ಮಿಸಲು ನಾಗರಿಕರ ಭಾಗವಹಿಸುವಿಕೆಯು ಅತ್ಯಗತ್ಯ. ನಾಗರಿಕರು ವಾರ್ಡ್ ಸಭೆಗಳಲ್ಲಿ ಭಾಗವಹಿಸುವ ಮೂಲಕ, ತಮ್ಮ ಅವಶ್ಯಕತೆಗಳನ್ನು ವ್ಯಕ್ತಪಡಿಸುವ ಮೂಲಕ, ನೀತಿ-ನಿಯಮಗಳ ಕುರಿತು ಅಭಿಪ್ರಾಯ ನೀಡುವ ಮೂಲಕ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಹಕರಿಸುವ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡಾಗ, ಆಡಳಿತದ ನಿರ್ಧಾರಗಳು ಜನರ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಪ್ರತಿಬಿಂಬಿಸುತ್ತವೆ. 

 

ಈ ಭಾಗವಹಿಸುವಿಕೆಯು ಸಾರ್ವಜನಿಕ ಮತ್ತು ಸರ್ಕಾರದ ನಡುವೆ ಪಾರದರ್ಶಕತೆ ಮತ್ತು ವಿಶ್ವಾಸವನ್ನು ಬಲಪಡಿಸುವುದಲ್ಲದೆ, ತಮ್ಮ ಸಮುದಾಯದ ಅಭಿವೃದ್ಧಿಯ ಮಾಲೀಕತ್ವವನ್ನು ತೆಗೆದುಕೊಳ್ಳಲು ನಾಗರಿಕರಿಗೆ ಅಧಿಕಾರ ನೀಡುತ್ತದೆ. ಜವಾಬ್ದಾರಿಯನ್ನು ಎಲ್ಲರೂ ಹಂಚಿಕೊಂಡಾಗ ಸ್ಥಳೀಯ ಆಡಳಿತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಮತ್ತು ನಿವಾಸಿಗಳು ಸೇವೆಗಳನ್ನು ಸ್ವೀಕರಿಸುವ  ನಿಷ್ಕ್ರಿಯ ವ್ಯಕ್ತಿಗಳಾಗದೆ, ಅವರ ನೆರೆಹೊರೆಯ ಭವಿಷ್ಯವನ್ನು ರೂಪಿಸುವಲ್ಲಿ ಸಕ್ರಿಯ ಪಾಲುದಾರರಾಗುತ್ತಾರೆ.

74ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ   ಮತ್ತು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ತಿದ್ದುಪಡಿ ಕಾಯ್ದೆ 2011, ನಾಗರಿಕರಿಗೆ ಸ್ಥಳೀಯ ಆಡಳಿತದಲ್ಲಿ ಅಧಿಕೃತವಾಗಿ ಭಾಗವಹಿಸಲು ಅವಕಾಶವನ್ನು ನೀಡುವ ಕಾನೂನುಗಳಾಗಿವೆ.

ವಾರ್ಡ್ ಸಮಿತಿಗಳು
ಸ್ಥಳೀಯ ಆಡಳಿತದಲ್ಲಿ ನಾಗರಿಕರಿಗೆ ಅಧಿಕೃತ ಭಾಗವಹಿಸುವಿಕೆಯ ಅವಕಾಶವನ್ನು ನೀಡಿರುವ  ಸಾಂವಿಧಾನಿಕ ಆದೇಶ

ಅರಿವು ಕಾರ್ಯಾಗಾರ - ನಾಗರಿಕರು ವಾರ್ಡ್ ಸಮಿತಿಗಳ ಕುರಿತ ಕಾನೂನು, ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆ ಮತ್ತು ನಾಗರಿಕರು ಅವುಗಳಲ್ಲಿ  ಹೇಗೆ ಸಕ್ರಿಯವಾಗಿ ಭಾಗವಹಿಸಬಹುದು ಎಂದು ವಿವರಿಸುವ ಕಾರ್ಯಾಗಾರ

Copy of Parisara Balaga.jpg
IMG-20210921-WA0044 (1)_edited_edited.jp

ಬೀದಿ ನಾಟಕಗಳು - ವಾರ್ಡ್ ಸಮಿತಿಗಳು, ಅವುಗಳ ಕುರಿತ ನೀತಿ ನಿಯಮಗಳು ಮತ್ತು ನಾಗರಿಕರಿಗೆ ಅವುಗಳ ಪ್ರಯೋಜನಗಳನ್ನು ಸರಳ ಮತ್ತು ಆಕರ್ಷಕ ರೀತಿಯಲ್ಲಿ ವಿವರಿಸಲು, ಜಾಗೃತಿ ಮೂಡಿಸಲು ಮತ್ತು ಸ್ಥಳೀಯ ಆಡಳಿತದಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಮೈಸೂರಿನಾದ್ಯಂತ ಬೀದಿ ನಾಟಕದ ಪ್ರದರ್ಶನ.

p9.jpeg
WhatsApp Image 2025-07-14 at 10.12_edite

ವಾರ್ಡ್ ಸಮಿತಿ ಬಳಗ - ಪ್ರತಿ ವಾರ್ಡಿನಲ್ಲಿ ಸಮಾನ ಮನಸ್ಕ ನಾಗರಿಕರನ್ನು ಒಟ್ಟುಗೂಡಿಸಿ, ತಮ್ಮ ವಾರ್ಡ್‌ನ ಸಮಸ್ಯೆಗಳು ಮತ್ತು ಅಭಿವೃದ್ಧಿಯ ಅಗತ್ಯಗಳನ್ನು ಚರ್ಚಿಸಲು ವಾರ್ಡ್ ಸಮಿತಿ ಬಳಗವನ್ನು ರಚಿಸಲಾಗುತ್ತದೆ. ಸ್ಥಳೀಯ ಆಡಳಿತದಲ್ಲಿ ನಾಗರಿಕರ ಸಕ್ರಿಯ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸಲು, ಮಾರ್ಗದರ್ಶನ ಪಡೆಯಲು ವಾರ್ಡ್ ಸಮಿತಿ ಬಳಗದ ಕಡ್ಡಾಯ ಮಾಸಿಕ ಸಭೆಗಳನ್ನು ನಡೆಸಲಾಗುತ್ತದೆ.

20250104_170922.jpg
IMG-20250201-WA0004_edited.jpg
WhatsApp Image 2025-07-27 at 14.47_edited.jpg

ಗುಬ್ಬಿವಾಣಿ ಟ್ರಸ್ಟ್®. Ph# 7259936111

bottom of page