top of page
"ಅವಳ ಹೆಜ್ಜೆ" ಮಹಿಳಾ ಕನ್ನಡ ಕಿರುಚಿತ್ರೋತ್ಸವ - 2026
"ಅವಳ ಹೆಜ್ಜೆ" ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರೋತ್ಸವ
2025ರಿಂದ ಪ್ರಾರಂಭವಾದ ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯ "ಅವಳ ಹೆಜ್ಜೆ ಕಿರುಚಿತ್ರೋತ್ಸವ" ಕೇವಲ ಕಿರುಚಿತ್ರ ಪ್ರದರ್ಶನವಲ್ಲ. ಮಹಿಳೆಯರ ಅನುಭವ, ದೃಷ್ಟಿಕೋನಗಳಿಗೆ ವೇದಿಕೆ ನೀಡುವ, ಲಿಂಗ ಸಮಾನತೆಯ ಚಿಂತನೆಗೆ ಉತ್ತೇಜನ ನೀಡುವ ಮತ್ತು ಮಹಿಳಾ ಸಬಲೀಕರಣದ ಧ್ಯೇಯವುಳ್ಳ ಒಂದು ಸಾಂಸ್ಕೃತಿಕ ಚಳವಳಿ.
ಕ್ಯಾಮೆರಾ ಹಿಂದೆ ಮಹಿಳೆ ಇಲ್ಲದಿದ್ದರೆ, ಪರದೆಯ ಮೇಲಿನ ಮಹಿಳಾ ಪಾತ್ರಗಳು ಕೇವಲ ಗ್ಲಾಮರ್ ಗೆ ಸೀಮಿತವಾಗುವ ಅಪಾಯವಿದೆ. ದೃಶ್ಯಮಾಧ್ಯಮವು ಮಹಿಳೆಯರ ಬದುಕು, ಕತೆಗಳು ಮತ್ತು ದೃಷ್ಟಿಕೋನಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಲು ಶಕ್ತಿಯುತವಾಗಿರುವುದರಿಂದ, ಮಹಿಳಾ ನಿರ್ದೇಶಕಿಯರನ್ನು ಪ್ರೋತ್ಸಾಹಿಸುವುದು ಹಾಗೂ ಅವರ ಕಥನೆಗಳಿಗೆ ಸಬಲ ವೇದಿಕೆ ಒದಗಿಸುವುದು ಈ ಚಿತ್ರೋತ್ಸವದ ಮುಖ್ಯ ಉದ್ದೇಶವಾಗಿದೆ.
bottom of page
