"ಅವಳ ಹೆಜ್ಜೆ" ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಬಲೀಕರಣ ವಿಭಾಗದ ಪ್ರಧಾನ ಉದ್ದೇಶವೆಂದರೆ ಎಲ್ಲಾ ಕ್ಷೇತ್ರಗಳಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವುದು ಮತ್ತು ಮಹಿಳೆಯರ ಧ್ವನಿಯನ್ನು ವರ್ಧಿಸುವುದು. ಹೆಣ್ಣಿನ ಹೆಜ್ಜೆ ಗುರುತು ಆಟದ ಮೈದಾನದಿಂದ ಬೋರ್ಡ್ ರೂಂವರೆಗೂ ಎಲ್ಲೆಡೆ ಕಾಣುವ ಆಶಯದೊಂದಿಗೆ 2017ರಲ್ಲಿ ಶಾಂತಲಾ ದಾಮ್ಲೆಯವರು ಪ್ರಾರಂಭಿಸಿದ ಸಾಮಾಜಿಕ ಸಂಕಲ್ಪವಾಗಿದ್ದ “ಅವಳ ಹೆಜ್ಜೆ”, 2024ರಲ್ಲಿ 'ಗುಬ್ಬಿವಾಣಿ ಟ್ರಸ್ಟ್' ನ "ಮಹಿಳಾ ಸಬಲೀಕರಣ" ವಿಭಾಗವಾಗಿ ಹೊಸ ರೂಪ ಪಡೆದಿದೆ.
ಮಹಿಳಾ ಸಬಲೀಕರಣ ವಿಭಾಗದಲ್ಲಿ ಪ್ರಮುಖವಾಗಿ ಸಾಧನೆಯ ಗುರಿಯನ್ನು ಹೊತ್ತ ಮಹಿಳೆಯರಿಗೆ ದಿಟ್ಟ ಹೆಜ್ಜೆಗಳನ್ನಿಡಲು ಬೇಕಾಗುವ ಕೌಶಲ್ಯಗಳನ್ನು ಕಲಿಸುವುದು ಮತ್ತು ಸಮಾಜದ ಪೂರ್ವಾಗ್ರಹಗಳ ಇತಿಮಿತಿಗಳನ್ನು ದಾಟಿ ತಮ್ಮ ಕನಸುಗಳನ್ನು ಸಾಕಾರಮಾಡಿಕೊಳ್ಳಲು ಸಜ್ಜಾಗಿಸುವುದು ಮತ್ತು ಮಹಿಳೆಯರು ಪರಸ್ಪರ ಬೆಂಬಲಕ್ಕೆ ನಿಲ್ಲುವಂಥ ವೇದಿಕೆಯನ್ನು ಒದಗಿಸುವುದು ಸೇರಿದಂತೆ ಹಲವು ಚಟುವಟಿಕೆಗಳು ಸೇರಿವೆ.
ಕಾರ್ಯಾಗಾರಗಳು
ಲಿಂಗ ಸಂವೇದನೆ, ಋತುಚಕ್ರ, ಋತುಬಂಧ, ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ಈಗಾಗಲೇ ನಡೆಸುತ್ತಿದ್ದು, ಇತರ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಸಹಾ ಆಯೋಜಿಸಲಾಗುತ್ತದೆ.
ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.
ಮಹಿಳಾ ಧ್ವನಿಗೆ ವೇದಿಕೆ
ಪ್ಯಾಶನ್ ಶೋ, ಬೊಂಬೆ ಹಬ್ಬ, ವೆಬಿನಾರ್ ಸರಣಿ, ನಾಟಕ ಸ್ಪರ್ಧೆ, ಸಂದರ್ಶನ ಸರಣಿ, ಚರ್ಚಾಗೋಷ್ಠಿ, ಕಿರುಚಿತ್ರೋತ್ಸವ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲ ಉದ್ದೇಶ ಮಹಿಳೆಯರ ಅನುಭವ, ದೃಷ್ಟಿಕೋನಗಳಿಗೆ ವೇದಿಕೆ ನೀಡುವುದು ಮತ್ತು ಲಿಂಗ ಸಮಾನತೆಯ ಚಿಂತನೆಗೆ ಉತ್ತೇಜನ ನೀಡುವುದಾಗಿದೆ. ಈ ಹಿಂದೆ ನಡೆದ ಕಾರ್ಯಕ್ರಮಗಳ ವಿವರ ಸಾಗಿ ಬಂದ ಹಾದಿ ಇಲ್ಲಿದೆ.
ಅವಳ ಹೆಜ್ಜೆ ಕಿರುಚಿತ್ರೋತ್ಸವ – 2025 ರಲ್ಲಿ ಆರಂಭವಾದ ಈ ಉತ್ಸವವು ಕೇವಲ ಸ್ಪರ್ಧೆಯಲ್ಲ; ಕ್ಯಾಮೆರಾ ಹಿಂದೆ ಮಹಿಳೆ ಇಲ್ಲದಿದ್ದರೆ, ಪರದೆಯ ಮೇಲಿನ ಮಹಿಳಾ ಪಾತ್ರಗಳು ಕೇವಲ ಗ್ಲಾಮರ್ ಗೆ ಸೀಮಿತವಾಗುವ ಅಪಾಯವಿದೆ. ಈ ಚಿತ್ರೋತ್ಸವದ ಮೂಲ ಉದ್ದೇಶ ಮಹಿಳಾ ಸಬಲೀಕರಣವಾಗಿದ್ದು, ಮಹಿಳೆಯರ ಬದುಕು, ಕತೆಗಳು ಮತ್ತು ದೃಷ್ಟಿಕೋನಗಳನ್ನು ಸಿನಿಮಾ ಎಂಬ ಶಕ್ತಿಶಾಲೀ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಲು ಮಹಿಳಾ ನಿರ್ದೇಶಕಿಯರನ್ನು ಪ್ರೇರೇಪಿಸುವುದರ ಮೂಲಕ ಒಂದು ಸಾಂಸ್ಕೃತಿಕ ಚಳವಳಿಯಾಗಿ ಬೆಳೆಸುವ ಪ್ರಯತ್ನವಾಗಿದೆ.
"ಅವಳ ಹೆಜ್ಜೆ ಕಿರುಚಿತ್ರೋತ್ಸವ"ದ ವಿಜೇತ ಕಿರುಚಿತ್ರಗಳು, ಪ್ರದರ್ಶನ ಇತ್ಯಾದಿ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
