ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ಅರಿವು
ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ಕುರಿತಾದ ಈ ಅರಿವು ಕಾರ್ಯಾಗಾರವು ಭಾಗವಹಿಸುವವರಿಗೆ, ವಿಶೇಷವಾಗಿ ಹುಡುಗಿಯರು ಮತ್ತು ಮಹಿಳೆಯರಿಗೆ ಋತುಚಕ್ರ, ಅದರ ಸಂಬಂಧಿತ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳು, ನೈರ್ಮಲ್ಯ ಅಭ್ಯಾಸಗಳ ಪ್ರಾಮುಖ್ಯತೆ ಹಾಗು ಮುಟ್ಟಿನ ಉತ್ಪನ್ನಗಳ ಸುರಕ್ಷಿತ ಬಳಕೆ ಮತ್ತು ವಿಲೇವಾರಿ ಬಗ್ಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ. ಇದು ನಿರ್ಬಂಧನೆಗಳನ್ನು ಮೀರಲು, ಮುಟ್ಟಿನ ಬಗ್ಗೆ ಮುಕ್ತ ಚರ್ಚೆಯನ್ನು ಉತ್ತೇಜಿಸಲು, ಮುಟ್ಟಿನ ಸಮಯದಲ್ಲಿ ಆರೋಗ್ಯ, ಘನತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಜ್ಞಾನವನ್ನು ಭಾಗವಹಿಸುವವರಿಗೆ ನೀಡಲು ಪ್ರಯತ್ನಿಸುತ್ತದೆ.
ಋತುಬಂಧದ ಅರಿವು
ಋತುಬಂಧದ ಬಗ್ಗೆ ಜಾಗೃತಿ ಕಾರ್ಯಾಗಾರವು, ಜೀವನದ ಈ ಹಂತದಲ್ಲಿ ಸಂಭವಿಸುವ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಮಹಿಳೆಯರಿಗೆ ಶಿಕ್ಷಣ ನೀಡುವುದು, ಮೂಡ ನಂಬಿಕೆಗಳು ಮತ್ತು ಕಳಂಕವನ್ನು ಹೋಗಲಾಡಿಸುವುದು, ರೋಗಲಕ್ಷಣಗಳ ನಿರ್ವಹಣೆ, ಜೀವನಶೈಲಿ ಹೊಂದಾಣಿಕೆಗಳು ಮತ್ತು ಲಭ್ಯವಿರುವ ಬೆಂಬಲ ವ್ಯವಸ್ಥೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ಮಹಿಳೆಯರಿಗೆ ಋತುಬಂಧವನ್ನು ಆತ್ಮವಿಶ್ವಾಸದಿಂದ ನಿಭಾಯಿಸಲು, ತಿಳುವಳಿಕೆಯುಳ್ಳ ಆರೋಗ್ಯವಂತ ಆಯ್ಕೆಗಳನ್ನು ಮಾಡಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಅರಿವು ನೀಡುತ್ತದೆ.
ಲಿಂಗ ಸೂಕ್ಷ್ಮತೆಯ ಅರಿವು
ಲಿಂಗ ಸಂವೇದನೆಯ ಕುರಿತು ಜಾಗೃತಿ ಕಾರ್ಯಾಗಾರವು ಎಲ್ಲಾ ಲಿಂಗಗಳ ನಡುವಿನ ಪರಸ್ಪರ ತಿಳುವಳಿಕೆ, ಗೌರವ ಮತ್ತು ಸಮಾನತೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದು, ಸಿದ್ದ ಮಾದರಿಯನ್ನು (ಸ್ಟೀರಿಯೊಟೈಪ್) ಪ್ರಶ್ನಿಸುತ್ತದೆ, ಪಕ್ಷಪಾತಗಳನ್ನು ಪರಿಹರಿಸುತ್ತದೆ ಮತ್ತು ಒಳಗೊಳ್ಳುವ ನಡವಳಿಕೆಗಳನ್ನು ಹಾಗೂ ಮನೋಭಾವಗಳನ್ನು ಪ್ರೋತ್ಸಾಹಿಸುತ್ತದೆ. ಈ ಮೂಲಕ ಮನೆ, ಶಾಲೆ, ಕೆಲಸದ ಸ್ಥಳ ಹಾಗೂ ಸಮುದಾಯಗಳಲ್ಲಿ ಹೆಚ್ಚು ಗೌರವಾನ್ವಿತ ಮತ್ತು ಸಮಾನತೆಯ ವಾತಾವರಣವನ್ನು ರೂಪಿಸುವ ಪ್ರಯತ್ನ.
ಇಡಿ ದಿಟ್ಟ ಹೆಜ್ಜೆ - ಯುವತಿಯರಿಗಾಗಿ ವ್ಯಕ್ತಿತ್ವ ವಿಕಸನ ತರಬೇತಿ
ಪ್ರತೀ ವರ್ಷ 10ನೇ ಮತ್ತು 12 ನೇ ತರಗತಿಯ ಫಲಿತಾಂಶ ಬಂದಾಗ “ವಿದ್ಯಾರ್ಥಿನಿಯರದೇ ಮೇಲುಗೈ” ಎಂಬ ವರದಿಯನ್ನು ನೋಡುತ್ತೇವೆ. ವಿಪರ್ಯಾಸವೆಂದರೆ, ಅದೇ ಯುವತಿಯರು ಕೆಲವೇ ವರ್ಷಗಳಲ್ಲಿ ತಮ್ಮ ವೃತ್ತಿಗಳಲ್ಲಿ ಹಿಂದೆ ಬೀಳಲು ಆರಂಭಿಸುತ್ತಾರೆ. ಇದನ್ನು ಬದಲಾಯಿಸಿ, ಇತಿಮಿತಿಗಳನ್ನು ದಾಟಬಯಸುವ ಯುವತಿಯರು ತಮ್ಮ ಪೂರ್ಣ ಸಾಮರ್ಥ್ಯದ ಗುರಿಯನ್ನು ಯಶಸ್ವಿಯಾಗಿ ಮುಟ್ಟಲು ಪ್ರೇರೇಪಿಸುವುದು ಅವಳ ಹೆಜ್ಜೆಯ ತರಬೇತಿಯ ಪ್ರಮುಖ ಉದ್ದೇಶ.
ಕಾಲೇಜು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಾಗಾರಗಳನ್ನು ನಡೆಸುತ್ತೇವೆ. ಗುಂಪು ಚರ್ಚೆ, ವೀಡಿಯೊಗಳು, ನಿಜಜೀವನದ ಉದಾಹರಣೆಗಳು, ಕೇಸ್ ಸ್ಟಡಿ, ಗುಂಪು ಚಟುವಟಿಕೆ, ಮುಂತಾದ ನೂತನ ಕಲಿಕಾ -ವಿಧಾನಗಳನ್ನು ಅಳವಡಿಸಿ ಈ ಕೆಳಕಂಡ ವಿಷಯಗಳಲ್ಲಿ ತರಬೇತಿಯನ್ನು ಕನ್ನಡ ಮತ್ತು ಇಂಗ್ಲೀಷಿನ ಸರಳ ಆಡುಭಾಷೆಯಲ್ಲಿ ನೀಡುತ್ತೇವೆ:
-
ಮಹಿಳೆಯರು ಹಿಂದೆ ಬೀಳುವ ಕಾರಣಗಳ ಅರಿವು
-
ಅಡೆತಡೆಗಳನ್ನು ಜಯಿಸುವ ಸೂತ್ರಗಳು.
-
ಕ್ರಿಯಾತ್ಮಕ ಆಲೋಚನಾ ವಿಧಾನಗಳು
-
ಯಶಸ್ವಿ ಮಹಿಳೆಯರ ಅನುಭವಗಳು
-
ಆತ್ಮವಿಶ್ವಾಸ, ಆತ್ಮಸ್ಥೈರ್ಯ






















