top of page

ಅವಳ ಹೆಜ್ಜೆ ನೆಟ್‌ವರ್ಕ್

About Us

ಗುಬ್ಬಿವಾಣಿ ಟ್ರಸ್ಟ್® ಯೋಜನೆಯಾದ ಅವಳ ಹೆಜ್ಜೆ ನೆಟ್‌ವರ್ಕ್, ಕರ್ನಾಟಕದ ಮಹಿಳೆಯರ ಸೋದರತ್ವಕ್ಕಾಗಿ ರಚಿಸಿದ ಸಂಪರ್ಕಜಾಲ. ಯಾವುದೇ ಮಹಿಳೆ ತನ್ನ ಬದುಕಿನ ಪಯಣದಲ್ಲಿ ಒಂಟಿಯಾಗಿರಬಾರದು, ಅಗತ್ಯವಿರುವ ಬೆಂಬಲ ಸದಾ ಆಕೆಯ ಕೈಗೆಟುಕುವಂತಿರಬೇಕು ಎಂಬ ಉದ್ದೇಶದಿಂದ ರೂಪುಗೊಂಡ ರಾಜ್ಯವ್ಯಾಪಿ ಸಂಪರ್ಕಜಾಲವಾಗಿದೆ.

ಮಹಿಳೆಯರಿಗೆಂದೇ ಮೀಸಲಾದ ಮೊಬೈಲ್ ವೇದಿಕೆಯನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುವ ಅವಳ ಹೆಜ್ಜೆ ನೆಟ್‌ವರ್ಕ್, ತಂತ್ರಜ್ಞಾನದ ನೆರವಿನಿಂದ ಮಹಿಳೆಯರು ಪರಸ್ಪರ ಬೆಂಬಲ ಮತ್ತು ಅವಕಾಶಗಳನ್ನು ಒದಗಿಸುವ ಜಾಲವಾಗಿದೆ. 

ಆರ್ಥಿಕ ಸ್ವಾವಲಂಬನೆ, ನಾಯಕತ್ವ ಮತ್ತು ತನ್ನ ಆಯ್ಕೆಯ ಬದುಕನ್ನು ಕಟ್ಟಿಕೊಳ್ಳುವ ಮಹಿಳೆಯ ಪಯಣದಲ್ಲಿ ಇದು ಸಕ್ರಿಯ ಸಹಯೋಗಿಯಾಗಿ ಕಾರ್ಯನಿರ್ವಹಿಸುತ್ತದೆ. ಮಹತ್ವಾಕಾಂಕ್ಷೆ ಮತ್ತು ಅವಕಾಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ಮಹಿಳೆಯರು ಘನತೆಯಿಂದ, ಸ್ವಾವಲಂಬಿಯಾಗಿ ಬದುಕಲು ಈ ಸಂಪರ್ಕಜಾಲವು ಶಕ್ತಿ ನೀಡುತ್ತದೆ.

ಆ್ಯಪ್ ನ ಪ್ರಮುಖ ಅಂಶಗಳು

  • ತಜ್ಞರ ಮಾರ್ಗದರ್ಶನ: ವೇದಿಕೆಯ ಮೂಲಕ ಸದಸ್ಯರು ವಿವಿಧ ಕ್ಷೇತ್ರಗಳ ಅನುಭವಿ ಮಹಿಳೆಯರೊಂದಿಗೆ ಸಂಪರ್ಕ ಸಾಧಿಸಿ, ವೃತ್ತಿಜೀವನದ ಬೆಳವಣಿಗೆ, ಉದ್ಯಮ ವಿಸ್ತರಣೆ ಮತ್ತು ವೈಯಕ್ತಿಕ ಪ್ರಗತಿಗೆ ಅಗತ್ಯವಾದ ಮಾರ್ಗದರ್ಶನ ಪಡೆಯಬಹುದು.

  • ಪರಸ್ಪರ ಕಲಿಕೆ: ಸದಸ್ಯರು ತಮ್ಮ ಕೌಶಲ್ಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಕಲಿಯಲು ಆ್ಯಪ್ ಅವಕಾಶ ಕಲ್ಪಿಸುತ್ತದೆ. ಪ್ರತಿಯೊಬ್ಬರಿಗೂ ಕಲಿಸಲು ಮತ್ತು ಕಲಿಯಲು ಅನುವು ಮಾಡಿಕೊಡುವ ಸಮುದಾಯವನ್ನು ನಿರ್ಮಿಸುತ್ತದೆ.

  • ರಾಜ್ಯವ್ಯಾಪಿ ಬಲ: ಕರ್ನಾಟಕದಾದ್ಯಂತ ಮಹಿಳೆಯರನ್ನು ಒಗ್ಗೂಡಿಸುವ ಸಕ್ರಿಯ ಮೊಬೈಲ್ ಸಮುದಾಯದ ಮೂಲಕ, ವ್ಯಾಪಕ ಪರಿಣಾಮ ಮತ್ತು ಸುಸ್ಥಿರ ಸಾಮಾಜಿಕ ಬದಲಾವಣೆಗೆ ಸಂಪರ್ಕಜಾಲವು ಉತ್ತೇಜನ ನೀಡುತ್ತದೆ.

 

ಮತ್ತೊಬ್ಬ ಮಹಿಳೆಗೆ ಬೆಂಬಲವಾಗಿ ನಿಲ್ಲುವುದು ಪ್ರತಿಯೊಬ್ಬರ ಸಹಜ ಗುಣ ಹಾಗೂ ಅಚಲ ಸಂಕಲ್ಪವಾಗುವಂತಹ ಮನಸ್ಥಿತಿಯನ್ನು ಸೃಷ್ಟಿಸುವುದೇ ನಮ್ಮ ಗುರಿ. ಅವಳ ಹೆಜ್ಜೆ ಸಂಪರ್ಕಜಾಲವು ಹೊಸ ಸಾಧ್ಯತೆಗಳ ಬಾಗಿಲನ್ನು ತೆರೆಯುವ ಒಂದು ಪ್ರಯತ್ನವಾಗಿದ್ದು, ಪ್ರತಿಯೊಬ್ಬ ಮಹಿಳೆಯೂ ಮತ್ತೊಬ್ಬರ ಯಶಸ್ಸಿಗೆ ಪರಸ್ಪರ ಪ್ರೋತ್ಸಾಹ ನೀಡುವ ಸಂಸ್ಕೃತಿಯನ್ನು ನಿರ್ಮಿಸುತ್ತದೆ.

 

ಅವಳ ಹೆಜ್ಜೆ ನೆಟ್‌ವರ್ಕ್ ಆ್ಯಪ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

AHN app 1_edited.jpg
AHN app 2_edited.jpg

ಗುಬ್ಬಿವಾಣಿ ಟ್ರಸ್ಟ್®. Ph# 7259936111

bottom of page