top of page
MCC Bldg Drawing.png

ಮೈಸೂರು ಪೌರ ನಾಯಕತ್ವ ಕಾರ್ಯಕ್ರಮ (MCLP)

ಆಶಯ

ಮೈಸೂರಿನ ನಗರಾಡಳಿತದಲ್ಲಿ ಭಾಗವಹಿಸುವುದನ್ನು ಹಾಗು ಸ್ಥಳೀಯ ಆಡಳಿತದೊಂದಿಗೆ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸಲು ನಾಗರಿಕ-ಚಾಲಿತ ಉಪಕ್ರಮವೊಂದನ್ನು ಪ್ರಾರಂಭಿಸುತ್ತಿದ್ದೇವೆ.

 

ನಮ್ಮ ಗುರಿಗಳು ಮೂರು:
ಮೊದಲನೆಯದಾಗಿ, ಭ್ರಷ್ಟಾಚಾರ-ಮುಕ್ತ, ಸ್ವಚ್ಛ ಆಡಳಿತಕ್ಕೆ ಬದ್ಧರಾಗಿರುವ ಕಾರ್ಯಕ್ಷಮತೆಯುಳ್ಳ ಮಹಿಳೆಯರು, ಯುವಜನರು ಮತ್ತು ಮೊದಲ ಬಾರಿಗೆ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರನ್ನು, ಅವರ ಗೆಲುವಿಗೆ ಅಗತ್ಯವಾದ ತರಬೇತಿ, ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸಿ ಸಜ್ಜುಗೊಳಿಸುವುದು.

​

ಎರಡನೆಯದಾಗಿ, ಮೈಸೂರಿನ ಸಮಾನ ಮನಸ್ಕ ಸಕ್ರಿಯ ನಾಗರಿಕರು, ಆರ್‌ಡಬ್ಲ್ಯೂಎಗಳು, ಎನ್‌ಜಿಒಗಳು ಮತ್ತು ನಾಗರಿಕ ಸಂಘಟನೆಗಳ ಸಮನ್ವಯಗೊಳಿಸುವ ಮೂಲಕ, ನಮ್ಮ ಸಾಮೂಹಿಕ ಧ್ವನಿಯನ್ನು ಮತ್ತಷ್ಟು ಬಲಪಡಿಸುವುದು.

​

ಮೂರನೆಯದಾಗಿ, ವಾರ್ಡ್ ಸಮಿತಿಗಳು, ಸಮುದಾಯ ಲೆಕ್ಕಪರಿಶೋಧನೆಗಳು ಮತ್ತು ಅಂಕಿ-ಅಂಶ ಆಧಾರಿತ ಮೇಲ್ವಿಚಾರಣೆಯ ಮೂಲಕ, ನಾಗರಿಕ-ಚಾಲಿತ ಸ್ಥಳೀಯ ಆಡಳಿತಕ್ಕೆ ಬೆಂಬಲ ವ್ಯವಸ್ಥೆಯನ್ನು ನಿರ್ಮಿಸುವುದು. ಆ ಮೂಲಕ ಸ್ಥಳೀಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನವನ್ನು ಹೆಚ್ಚಿಸಿ, ಪಾಲಿಕೆಯ ಕಾರ್ಯವನ್ನು ಸಶಕ್ತಗೊಳಿಸುವುದು.

​​

ಸಂಕ್ಷಿಪ್ತವಾಗಿ, ನಾವು ಹೊಸ ನಾಯಕರನ್ನು ರೂಪಿಸುತ್ತಿದ್ದೇವೆ, ನಾಗರಿಕರನ್ನು ಸಬಲೀಕರಣಗೊಳಿಸುತ್ತಿದ್ದೇವೆ. ಜನರು ಕೇವಲ ಮತ ಚಲಾಯಿಸುವುದಷ್ಟೇ ಅಲ್ಲದೆ, ತಮಗೆ ಬೇಕಾದಂತಹ ನಗರಾಡಳಿತವನ್ನು ಸಕ್ರಿಯವಾಗಿ ರೂಪಿಸಿಕೊಳ್ಳುವಂತಹ ಮಾದರಿಯನ್ನು ಸೃಷ್ಟಿಸುತ್ತಿದ್ದೇವೆ.

 

ಮೈಸೂರಿನ ಭವಿಷ್ಯವನ್ನು ರೂಪಿಸಲು ನಮ್ಮೊಂದಿಗೆ ಸೇರಿ. ಭಾಗವಹಿಸಲು ಸಂಪರ್ಕಿಸಿ.

7259936111

ಗುಬ್ಬಿವಾಣಿ ಟ್ರಸ್ಟ್®. Ph# 7259936111

bottom of page